ಮುಖಪುಟ >> ಭಾಷಾ ಅಲ್ಪಸಂಖ್ಯಾತರ ಶಿಕ್ಷಣ >> ಹಿಂದಿ ಮತ್ತು ಅರೇಬಿಕ್ ಶಿಕ್ಷಣ.

ಹಿಂದಿ ಮತ್ತು ಅರೇಬಿಕ್ ಶಿಕ್ಷಣ :

ರಾಜ್ಯದಲ್ಲಿನ ಅರೇಬಿಕ್ ಶಾಲೆಗಳ ಮಾಹಿತಿ:

ಅರೇಬಿಕ್ ಅನುದಾನ ಸಂಹಿತೆ, ಸರ್ಕಾರದ ಆದೇಶ ಸಂಖ್ಯೆ. ಇಡಿ.15ಪಿಎಸ್‍ಇ 79 ಬೆಂಗಳೂರು ದಿನಾಂಕ:20.06.1979 ರಿಂದ ಜಾರಿಗೆ ಬಂದಿದೆ. ಇಲ್ಲಿ ಸ್ಪಷ್ಟಪಡಿಸಿರುವ ಮಾರ್ಗಸೂಚಿ ಹಾಗೂ ನಿಯಮಗಳಡಿಯಲ್ಲಿ ಅರೇಬಿಕ್ ಶಾಲೆಗಳನ್ನು ನೋಂದಣಿ ಮಾಡುವ, ಮಾನ್ಯತೆ ನವೀಕರಣಗೊಳಿಸುವ ಕಾರ್ಯಚಟುವಟಿಕೆಗಳನ್ನು ಈ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.
ಮಾನ್ಯ ಆಯುಕ್ತರ ಆದೇಶ ಸಂಖ್ಯೆ:ಎಂಸಿ.10-18ಅರೇಬಿಕ್2006-07 ದಿನಾಂಕ:19.01.2007 ರಂತೆ ರಾಜ್ಯ ವ್ಯಾಪಿ ಅರೇಬಿಕ್ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿ ಪರಿಶೀಲನೆ ಮೇಲ್ವಿಚಾರಣೆ ಅರೇಬಿಕ್ ಶಾಲೆಗಳ ಮಾನ್ಯತೆ, ಮಾನ್ಯತೆ ನವೀಕರಣ ಮಾಡುವ ಅಧಿಕಾರವನ್ನು ವಿಭಾಗೀಯ ಸಹನಿರ್ದೇಶಕರಿಂದ ಆಯಾ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರಿಗೆ ಪ್ರತ್ಯಾಯೋಜಿಸಲಾಗಿದೆ.
ಅರೇಬಿಕ್ ಕಾಲೇಜುಗಳ ನೋಂದಣಿಯನ್ನು ಸರ್ಕಾರದ ಹಂತದಲ್ಲಿ ಮಾಡಲಾಗುತ್ತಿದೆ. ಸರ್ಕಾರದಿಂದ ನೋಂದಣಿ ಪಡೆದು ಸ್ಥಾಪನೆಯಾಗಿರುವ ಅರೇಬಿಕ್ ಕಾಲೇಜುಗಳ ಮಾನ್ಯತೆ ನವೀಕರಣವನ್ನು ಈ ನಿರ್ದೇಶನಾಲಯದಲ್ಲಿ ನಿರ್ವಹಿಸಲಾಗುತ್ತಿದೆ.
ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಆದೇಶಗಳನ್ವಯ ಅರ್ಹ ಅರೇಬಿಕ್ ಶಾಲಾ ಕಾಲೇಜುಗಳನ್ನು ಸರ್ಕಾರದ ಸಹಾಯಾನುದಾನಕ್ಕೆ ಒಳಪಡಿಸಲು ಪ್ರಸ್ತಾವನೆಗಳನ್ನು ಸಮುಚಿತ ಮಾರ್ಗದಲ್ಲಿ ಪಡೆದು ಅರ್ಹತಾಂಶಗಳನ್ನು ಪೂರಕ ದಾಖಲೆಗಳೊಂದಿಗೆ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಲು ಈ ನಿರ್ದೇಶನಾಲಯದ ಹಂತದಲ್ಲಿ ಕ್ರಮ ವಹಿಸಲಾಗುತ್ತಿದೆ.

ರಾಜ್ಯದಲ್ಲಿರುವ ಅರೇಬಿಕ್ ಶಾಲೆಗಳ ಸಂಖ್ಯೆ :

ಅನುದಾನಿತ ಶಾಲೆಗಳು - 94 ಅನುದಾನರಹಿತ ಶಾಲೆಗಳು - 220 ಒಟ್ಟು - 314

ಅನುದಾನಿತ ಕಾಲೇಜುಗಳು - 03 ಅನುದಾನರಹಿತ ಕಾಲೇಜುಗಳು - 04 ಒಟ್ಟು - 07

ರಾಜ್ಯದಲ್ಲಿನ ಹಿಂದಿ ವಿದ್ಯಾಲಯಗಳ ಮಾಹಿತಿ:

ಹಿಂದಿ ಭಾಷೆ ಮಾತನಾಡದ ಪ್ರದೇಶದಲ್ಲಿ ಹಿಂದಿ ಭಾಷೆಯ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಆದೇಶ ಸಂಖ್ಯೆ: ಇಡಿ 15 ಪಿ.ಎಚ್.ಎನ್ 76 ದಿನಾಂಕ: 26.07.1979ರ ಅನ್ವಯ ಹಿಂದಿ ವಿದ್ಯಾಲಯಗಳನ್ನು ಸ್ಥಾಪಿಸಲಾಗಿರುತ್ತದೆ. ಪ್ರಸ್ತುತ 47 ಹಿಂದಿ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು ಅನುದಾನರಹಿತ ವಿದ್ಯಾಲಯಗಳಾಗಿರುತ್ತವೆ. ಮುಂದುವರಿದು, 05 ಸ್ವಯಿಚ್ಛಿಕ ಸ್ವಯಂ ಸೇವಾ ಸಂಸ್ಥೆಗಳಾಗಿರುತ್ತವೆ. ಈ ಸಂಸ್ಥೆಗಳು ಹಿಂದಿ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡುತ್ತಿವೆ.
ಕೇಂದ್ರಿಯ ಹಿಂದಿ ಸಂಸ್ಥಾನ್ ಆಗ್ರಾ, ರವರ ಸಹಯೋಗದೊಂದಿಗೆ ನಡೆಯುತ್ತಿರವ ಹಿಂದಿ ಶಿಕ್ಷಕ್ ಪಾರಂಗತ್ ವಿದ್ಯಾಲಯ ಮೈಸೂರು, ಈ ಸಂಸ್ಥೆಗೆ ರಾಜ್ಯ ಸರ್ಕಾರವು ಸಿಬ್ಬಂದಿ ವೇತನ, ಪ್ರಯಾಣ ಭತ್ಯೆ, ಸಾದಿಲ್ವಾರು ಮತ್ತು ಇತರೆ ಭತ್ಯೆಯ ಅನುದಾನವನ್ನು ಪ್ರತಿವರ್ಷ ನೀಡುತ್ತಿದೆ. ಎನ್.ಸಿ.ಟಿ.ಇ ನಿಯಾಮವಳಿ ಪ್ರಕಾರ ಈ ವಿದ್ಯಾಲಯದಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇದರಲ್ಲಿ 20 ಮಂದಿ ಸೇವಾನಿರತ ಶಿಕ್ಷಕರಾಗಿತ್ತಾರೆ, ಉಳಿದ 40 ವಿದ್ಯಾರ್ಥಿಗಳು ಖಾಸಗಿ ಅಭ್ಯರ್ಥಿಗಳಾಗಿರುತ್ತಾರೆ.
ಮುಂದುವರಿದು, ಹಿಂದಿ ಭಾಷೆಯನ್ನು ಮಾತನಾಡದ ರಾಜ್ಯದಲ್ಲಿ, ನಡೆಯುತ್ತಿರುವ ಸ್ವಯಿಚ್ಛಿಕ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗೆ ವೇತನವನ್ನು ಕೇಂದ್ರ ಸರ್ಕಾರವು 1998-99 ರಿಂದ ವೇತನವನ್ನು ಬಿಡುಗಡೆ ಮಾಡುತ್ತಿದೆ.

         
ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |ಕಾಯ್ದೆಹಕ್ಕು