ಮುಖಪುಟ >> ಪ್ರೌಢ ಶಿಕ್ಷಣ >> ದೈಹಿಕ ಶಿಕ್ಷಣ

ಪೀಠಿಕೆ

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು[ಪ್ರೌಢಶಿಕ್ಷಣ] ವಿಭಾಗದಡಿಯಲ್ಲಿ ದೈಹಿಕ ಶಿಕ್ಷಣ ಶಾಖೆಯ ಕಾರ್ಯ ನಿರ್ವಹಿಸುತ್ತಿದೆ. ಈ ಶಾಖೆಯಲ್ಲಿ ಕೆಳಕಂಡ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ:

  • ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶಾಲಾ ಹಂತ, ಕ್ಲಸ್ಟರ್ ಹಂತ, ಬ್ಲಾಕ್ ಹಂತ, ಜಿಲ್ಲಾ ಹಂತ, ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟದ ಕ್ರೀಡಾಸ್ಪರ್ದೆಯನ್ನು ಸಂಘಟಿಸುವುದು.
  • ರಾಜ್ಯ ಮಟ್ಟದಲ್ಲಿ ವಿಜೇತರಾದ ಮಕ್ಕಳಿಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆಯು ನಡೆಸುವ ರಾಷ್ಟ್ರಮಟ್ಟದ ಕ್ರೀಡಾಸ್ಪರ್ದೆಗಳಿಗೆ ಕಳುಹಿಸಲಾಗುವುದು.
  • ರಾಷ್ಟ್ರಮಟ್ಟದ ಕ್ರೀಡಾಸ್ಪರ್ದೆಗಳ ಸಂಘಟನೆಗೆ ಅನುದಾನ ಬಿಡುಗಡೆ ಮಾಡುವುದು ಮತ್ತು ತರಬೇತಿ ಶಿಬಿರಗಳನ್ನು ನಡೆಸುವುದು.
  • ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ಕ್ರೀಡೆಗಳಿಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಕ್ರೀಡಾ ಉಡುಪು ಮತ್ತು ಕ್ರೀಡಾಸಾಮಗ್ರಿ ವಿತರಣೆ ಬಗ್ಗೆ ಪ್ರಕ್ರಿಯೆಗಳನ್ನು ನಡೆಸುವುದು.
  • ರಾಷ್ಟ್ರೀಯ ಹಬ್ಬಗಳ ದಿನಾಚರಣೆಯಲ್ಲಿ ಇಲಾಖಾವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು. ಈ ಸಂಬಂಧ ಮಕ್ಕಳಿಗೆ ತರಬೇತಿಗೊಳಿಸುವುದು.
  • ಭಾರತ್ ಸೇವಾ ದಳ, ಭಾರತ್ ಸ್ಕೌಟ್ಸ್ ಮತ್ತು ಗ್ಯಡ್ಸ್ ಸಂಸ್ಥೆ ಹಾಗೂ ಭಾರತ್ ಸೇವಕ ಸಮಾಜ್ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುವುದು.
  • ವಿದ್ಯಾರ್ಥಿ ಕ್ರೀಡಾ ನಿಧಿ ಸಂಗ್ರಹಣೆ ಮತ್ತು ನಿರ್ವಹಣೆ.
  • ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ಕ್ರೀಡಾಚಟುವಟಿಕೆಗಳನ್ನು ಸಂಘಟಿಸುವುದು.

>> ಇಲಾಖೆಯಲ್ಲಿ ಕ್ರೀಡಾ ಚಟುವಟಿಕೆಗಳು.

>> ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಪಠ್ಯಕ್ರಮ.

ಸುತ್ತೋಲೆಗಳು

 

ಕ್ರ ಸಂ ವಿವರ ಅಳವಡಿಸಿದ ದಿನಾಂಕ
11
ದಿನಾಂಕ:27-06-2018ರಂದು ನಡೆದ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳ ಸಭೆಯ ನಡಾವಳಿಗಳು. 25-07-2018
10
2015-16ನೇ ಸಾಲಿನಲ್ಲಿ ರಾಜ್ಯಮಟ್ಟ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಬಗ್ಗೆ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ ಸುತ್ತೋಲೆ. 25-07-2016
09
2011-12ನೇ ಸಾಲಿನಲ್ಲಿ ಸರ್ಕಾರದ ಮುಂದುವರೆದ ಯೋಜನೆಯಡಿಯಲ್ಲಿ ದೈಹಿಕ ಶಿಕ್ಷಣ ಅಭಿವೃದ್ಧಿ ಕಾರ್ಯ ಕ್ರಮಗಳಿಗಾಗಿ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ. 21-03-2012
08
ಪ್ರೋ.ವ್ಯೆದ್ಯಾನಾಥನ್ ಸಮಿತಿ ಶಿಫಾರಸ್ಸಿನನ್ವಯ ದೈಹಿಕ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಮುಂದುವರೆದ ಯೋಜನಾ ಕಾರ್ಯಕ್ರಮದಡಿಯಲ್ಲಿ ಅನುದಾನ ಬಿಡುಗಡೆ ಮಾಡುತ್ತಿರುವ ಬಗ್ಗೆ. 17-03-2012
07
28-01-2012
06
ಮುಂದುವರೆದ ಯೋಜನೆ ಅಡಿಯಲ್ಲಿ ಕ್ರೀಡಾಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.  
05
ಪ್ರೋ.ವ್ಯೆದ್ಯಾನಾಥನ್ ಸಮಿತಿ ಶಿಫಾರಸ್ಸಿನನ್ವಯ ದೈಹಿಕ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ.  
04

ದೈಹಿಕ ಶಿಕ್ಷಣ ಅಭಿವೃದ್ಧಿಗೆ ಯೋಜನಾ ಲೆಕ್ಕ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾದ ಅನುದಾನವನ್ನು ನಿಯಮಾನುಸಾರ ಬಳಕೆ ಮಾಡುವ ಬಗ್ಗೆ ಸುತ್ತೋಲೆ.

 
03

2011-12ನೇ ಸಾಲಿನಲ್ಲಿ ಎಸ್.ಜಿ.ಎಫ್ ಐ ಆಯೋಜಿಸಿರುವ 57ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳ ಅರ್ಜಿಗಳಲ್ಲಿನ ವಿವರಗಳನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡುವ ಬಗ್ಗೆ ಸುತ್ತೋಲೆ.

 
02
ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನ ವಿತರಣೆ ಬಗ್ಗೆ ಸುತ್ತೋಲೆ.  
01
ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ/ಅಧಿಕಾರಿಗಳಿಗೆ ಕ್ರೀಡಾಸಾಮಗ್ರಿ ಮತ್ತು ಕ್ರೀಡಾಉಡುಪುಗಳನ್ನು ನೀಡುವ ಸಂಬಂಧ ದರಪಟ್ಟಿ ಕರೆಯುವ ಬಗ್ಗೆ.  

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು|
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್