ಮುಖಪುಟ >> ಸಿಸ್ ಲಿಪ್ >> ಸಾಂಸ್ಥಿಕ ರಚನೆ

ಸಾಂಸ್ಥಿಕ ರಚನೆ ಮತ್ತು ಸಿಬ್ಬಂದಿ :

ಸಿಸ್ಲೆಪ್ ಕರ್ನಾಟಕ ಸೊಸೈಟಿಗಳ ಕಾಯ್ದೆಯ ಅಡಿಯಲ್ಲಿ ನೋಂದಣಿಯಾಗಿರುವ ಸ್ವಾಯತ್ತ ಸಂಸ್ಥೆ. ಇದರ ಆಗುಹೋಗುಗಳನ್ನು ಆಡಳಿತ, ಕಾರ್ಯನಿರ್ವಾಹಕ ಮಂಡಳಿ, ಶೈಕ್ಷಣಿಕ ಮಂಡಳಿ ಹಾಗೂ ಸಿಬ್ಬಂದಿ ಮತ್ತು ಹಣಕಾಸು ಮಂಡಳಿಗಳು ನಿರ್ವಹಿಸುತ್ತವೆ.

  • ಆಡಳಿತ ಮಂಡಳಿ(ಜಿ.ಸಿ); ಸಿಸ್ಲೆಪ್ನ ಗುರಿ, ಕಾರ್ಯತಂತ್ರ ಮತ್ತು ತಾತ್ತಿತ್ವಕ ತಳಹದಿಯನ್ನು ನಿರ್ದೇಶಿಸುವುದು ಆಡಳಿತ ಮಂಡಳಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವರು ಇದರ ಅಧ್ಯಕ್ಷರಾಗಿದ್ದು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷರು, ಸಿಸ್ಲೆಪ್ನ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳು, ಸದಸ್ಯರುಗಳಾಗಿ ಶಿಕ್ಷಣ ಇಲಾಖೆಯ ಆಯುಕ್ತರು, ರಾಜ್ಯ ಯೋಜನಾ ನಿರ್ದೇಶಕರು, ಎಸ್.ಎಸ್.ಎ ಶಿಕ್ಷಣ ತಜ್ಞರು, ನಿರ್ವಹಣೆ ತಜ್ಞರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಮೊದಲಾದ 20 ಜನರು, ಕನಿಷ್ಠ ವರ್ಷಕ್ಕೊಮ್ಮೆ ಸಭೆ ಸೇರುವುದು.
  • ಕಾರ್ಯನಿರ್ವಾಹಕ ಮಂಡಳಿ:(ಇ.ಸಿ): ಸಿಸ್ಲೆಪ್ನ ನಿಗದಿತ ಚಟುವಟಿಗಳ ಉಸ್ತುವಾರಿ ಮತ್ತು ಪ್ರಗತಿ ಪರಿಶೀಲನೆ ಮಾಡುವುದು. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿದ್ದು, ಸಿಸ್ಲೆಪ್ನ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳು, ಸದಸ್ಯರುಗಳಾಗಿ ಶಿಕ್ಷಣ ಇಲಾಖೆಯ ಆಯುಕ್ತರು, ಶಿಕ್ಷಣ ತಜ್ಞರು, ನಿರ್ವಹಣೆ ತಜ್ಞರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ರಾಜ್ಯ ಯೋಜನಾ ನಿರ್ದೇಶಕರು, ಎಸ್.ಎಸ್.ಎ ವಿಶ್ವವಿದ್ಯಾಲಯದ ಕುಲಪತಿಗಳು, ಸರ್ಕಾರದಿಂದ ನಾಮಕರಣಗೊಂಡ ಅಜೀಂ ಪ್ರೇಮ್ ಜಿ ಫೌಂಡೇಷನ್ ಮತ್ತು ಅಕ್ಷರ ಫೌಂಡೇಷನ್ ಪ್ರತಿನಿಧಿಗಳು, ಇಬ್ಬರು ಶಿಕ್ಷಣ ತಜ್ಞರು ಹಾಗೂ ಸಿಸ್ಲೆಪ್ನ ವಿವಿಧ ವಿಭಾಗಗಳ ಮುಖ್ಯಸ್ಥರು ಸೇರಿದಂತೆ 15 ಜನರು. ಮೂರು ತಿಂಗಳಿಗೊಮ್ಮೆ ಸಭೆ ಸೇರುವುದು
  • ಶೈಕ್ಷಣಿಕ ಮಂಡಳಿ:ಸಿಸ್ಲೆಪ್ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು, ಅದರ ವಿಷಯ ಹಾಗೂ ವಿಧಾನಗಳನ್ನು ನಿರ್ಧರಿಸಿವುದು. ಸಿಸ್ಲೆಪ್ನ ನಿರ್ದೇಶಕರು ಅಧ್ಯಕ್ಷರಾಗಿದ್ದು, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಯ(ಡಿ.ಎಸ್.ಇ.ಆರ್.ಟಿ) ನಿರ್ದೇಶಕರು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ವಿಭಾಗಗಳ ನಿರ್ದೇಶಕರು, ಜಿಲ್ಲಾ ಶಿಕ್ಷಣ ಮತ್ತು ರಬೇತಿ ಸಂಸ್ಥೆಯ ಒಬ್ಬರು ಪ್ರಾಂಶುಪಾಲರು (ಆವರ್ತನ ಸ್ಥಾನ) ಇದರ ಸದಸ್ಯರು. ಕಾರ್ಯಕ್ರಮ ಸಲಹಾ ಸಮಿತಿಯಂತೆ ಕೆಲಸ ಮಾಡುವ ಈ ಮಂಡಳಿ ಸಿಸ್ಲೆಪ್ನ ಉದ್ದೇಶಗಳನ್ನು ಕಾರ್ಯಚಟುವಟಿಕೆಗಳ ಮೂಲಕ ಸಾಕಾರಗೊಳಿಸುತ್ತದೆ. ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಅಗತ್ಯವಿದ್ದಲ್ಲಿ ಎಷ್ಟು ಬಾರಿಯಾದರೂ ಸಭೆ ಸೇರಬಹುದು.
  • ಸಿಬ್ಬಂದಿ ಮತ್ತು ಹಣಕಾಸು ಮಂಡಳಿ: ಸಿಸ್ಲೆಪ್ನ ಆಯವ್ಯಯ ರೂಪಿಸುವುದು, ಸಿಬ್ಬಂದಿಗಳ ನೇಮಕ, ಸೇವಾ ನಿಯಮಗಳನ್ನು ರೂಪಿಸುವುದ, ಕಟ್ಟಡ ಮತ್ತು ಇತರೆ ಮೂಲಭೂತ ಸೌಕರ್ಯಗಳ ಉಸ್ತುವಾರಿ, ಮೊದಲಾದವು ಈ ಮಂಡಳಿಯ ಜವಾಬ್ದಾರಿ

ನೆಲೆ:

  • ಶೈಕ್ಷಣಿಕ ವಿಕೇಂದ್ರಿಕರಣದ ಆಶಯಕ್ಕೆ ಪೂರಕವಾಗಿ ಸಿಸ್ಲೆಪ್ ಅನ್ನು ಧಾರವಾಡದಲ್ಲಿ ಸ್ಥಾಪಿಸಲಾಗಿದೆ. ಇದಕ್ಕಾಗಿ ಧಾರವಾಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆವರಣದಲ್ಲಿ 2.5 ಎಕರೆ ನಿವೇಶನ ಒದಗಿಸಲಾಗಿದೆ. ಇಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ, ವಸತಿ ವ್ಯವಸ್ಥೆ, ಕ್ರೀಡಾ ಸಮುಚ್ಚಯ ಒಳಗೊಂಡಂತಹ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಡಯಟ್ನ ಆವರಣದಲ್ಲಿರುವ ನೂರೈವತ್ತು ವರ್ಷಗಳ ಇತಿಹಾಸ ಇರುವ ನೂಲು ಮತ್ತು ನೇಯ್ಗೆ ತರಬೇತಿ ಕಟ್ಟಡದಲ್ಲಿ ಸಂಸ್ಥೆಯನ್ನು ನೆಲೆಗೊಳಿಸಲಾಗಿದೆ
  • ಸಿಸ್ ಲಿಪ್ ಸ್ಥಾಪನೆಗಾಗಿ ಕೇಂದ್ರ ಸರ್ಕಾರವು ಮೂರು ಕೋಟಿ ರೂಪಾಯಿಗಳ ಅನುದಾನ ಒದಗಿಸಿದೆ. ಉಳಿದ ಖರ್ಚು ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸುತ್ತದೆ
ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು|
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್