Skip to content
ಮುಖಪುಟ >> ಮಧ್ಯಾಹ್ನ ಉಪಹಾರ ಯೋಜನೆ >> ಕಾರ್ಯಕ್ರಮಗಳು - ಆಹಾರ ಮತ್ತು ಪೋಷಣೆ

ಸೂಚಿತ ಆಹಾರ ಪಟ್ಟಿ :

ವಿದ್ಯಾರ್ಥಿಗಳಿಗೆ ವಾರದಲ್ಲಿ ಈ ಕೆಳಕಂಡಂತೆ ಆಹಾರವನ್ನು ತಯಾರಿಸಿ ನೀಡಲು ಸೂಚಿಸಲಾಗಿದೆ.

ವಾರ/ದಿನ

ನಿಗದಿ ಪಡಿಸಿರುವ ಆಹಾರದ ವಿವರ

ಸಾಂಬಾರಿಗೆ ಬಳಸಬೇಕಾದ ತರಕಾರಿ

ಷರಾ

ಸೋಮವಾರ

ಅನ್ನ-ಸಾಂಬಾರ್

ಪಾಲಕ್, ನುಗ್ಗೆ ಸೊಪ್ಪು ಅಥವಾ ಇತರೆ ಸೊಪ್ಪು,ಆಲೂಗೆಡ್ಡೆ, ಬದನೆಕಾಯಿ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು

ಬೇಳೆ/ಕಾಳನ್ನು ಕಡ್ಡಾಯಗೊಳಿಸಿದೆ.
ಈ ತರಕಾರಿಗಳೊಂದಿಗೆ ಸ್ಥಳೀಯ ಆಹಾರ ಪದ್ಧತಿಯನ್ವಯ ಸ್ಥಳೀಯವಾಗಿ ಬೆಳೆಯುವ ಇತರೆ ತರಕಾರಿ/ ಗೆಡ್ಡೆ/ಗೆಣಸುಗಳನ್ನು ಬಳಸುವುದು.
ಸ್ಥಳೀಯವಾಗಿ ಆಹಾರ ಪದ್ಧತಿಯನ್ವಯವೇ ತರಕಾರಿಗಳನ್ನು ಮತ್ತು ಸಾಂಬಾರು ಪದಾರ್ಥಗಳನ್ನು ಹೊಂದಾಣಿಕೆ ಮಾಡಿಕೊಂಡು ಆಹಾರ ಸಿದ್ಧಪಡಿಸುವುದು.
ಸಿದ್ಧಪಡಿಸಿದ ಸಾಂಬಾರು ಪದಾರ್ಥ/ಪುಡಿಗಳನ್ನು ಆಗ್ ಮಾರ್ಕ್ ಮುದ್ರೆ/ಪ್ರಮಾಣ ಪತ್ರ ಹೊಂದಿರುವ ತಯಾರಕರಿಂದ ತಯಾರಿಸಿದ ಪದಾರ್ಥಗಳನ್ನು ಮಾತ್ರ ಬಳಸುವುದು ಅಥವಾ ಉತ್ತಮ ಸಾಮಗ್ರಿಗಳನ್ನು ಬಳಸಿ ಸ್ವಂತವಾಗಿ ತಯಾರಿಸಿ ಬಳಸುವುದು.
ಸ್ಥಳೀಯ ಹವಾಮಾನ /ವಾತಾವರಣಕ್ಕೆ ಅನುಗುಣವಾಗಿ ತರಕಾರಿ ಮತ್ತು ಸಾಂಬಾರು ಪದಾರ್ಥಗಳನ್ನು ಬಳಸುವುದು.

ಮಂಗಳವಾರ

ಅನ್ನ-ಸಾಂಬಾರ್

ಬೂದುಕುಂಬಳ,ಕ್ಯಾರೆಟ್,ಬೀನ್ಸ್,ಎಲೆಕೋಸು, ಬೀಟ್ರೂಟ್,ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು

ಬುಧವಾರ

ಅನ್ನ-ಸಾಂಬಾರ್

ನುಗ್ಗೆಕಾಯಿ, ಬೀನ್ಸ್ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು

ಗುರುವಾರ

ಅನ್ನ-ಸಾಂಬಾರ್

ಕುಂಬಳಕಾಯಿ,ಸೋರೆಕಾಯಿ, ಸಾಂಬಾರುಸೌತೆ,ಬೆಂಡೆಕಾಯಿ,ಹೀರೆಕಾಯಿ,ಮೂಲಂಗಿ,ಇತರೆ ತರಕಾರಿಗಳು

ಶುಕ್ರವಾರ/
ಭಾನುವಾರ

ಬಿಸಿಬೇಳೆ ಬಾತ್

ಬೀನ್ಸ್,ಗೆಡ್ಡೆಕೋಸು,ಕ್ಯಾರೆಟ್, ಕ್ಯಾಪ್ಸಿಕಮ್,ಈರುಳ್ಳಿ ಟೊಮೆಟೋ ಇತರೆ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು

ಶನಿವಾರ

ಗೋಧಿ ಉತ್ಪನ್ನಗಳಿಂದ ತಯಾರಿಸಿದ ಆಹಾರ

ಈರುಳ್ಳಿ, ಬೀನ್ಸ್, ಕ್ಯಾರೆಟ್, ಎಲೆಕೋಸು ಸಬ್ಬಸ್ಸಿಗೆ ಸೊಪ್ಪು ಮತ್ತು ಇತರೆ ದ್ವಿದಳ ಧಾನ್ಯಗಳು

ಪೌಷ್ಠಿಕಾಂಶದ ವಿವರ:

ಮಧ್ಯಾಹ್ನ ಬಿಸಿಯೂಟ ನೀಡುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 450 (ಅಂದಾಜು) ಕ್ಯಾಲೋರಿ ಹಾಗೂ 12 ಗ್ರಾಂ ಪ್ರೋಟೀನನ್ನು, ಉನ್ನತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 700 (ಅಂದಾಜು) ಕ್ಯಾಲೋರಿ ಮತ್ತು 20 ಗ್ರಾಂ. ಪೋಟೀನನ್ನು ಒಳಗೊಂಡಂತೆ ಪೌಷ್ಠಿಕಾಂಶ ದೊರೆಯುತ್ತಿದೆ.

ಪ್ರತಿ ಮಗುವಿಗೆ ಪ್ರತಿದಿನದ ಆಹಾರ ಪೂರೈಕೆ ವಿವರ.

ಪ್ರತಿ ಮಗುವಿಗೆ ನೀಡುವ ಮಾತ್ರೆಗಳ ಸರಬರಾಜು ವಿವರ..

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು|
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್